Wednesday, April 9, 2008

ವೇದ ಶಿಬಿರ ಮತ್ತು ಪ್ರಶಸ್ತಿ ಪ್ರದಾನ

ಏ.15 ರಿಂದ ಗುತ್ತಿಗಾರಿನಲ್ಲಿ ವೇದ ಶಿಬಿರ

ಪಂಜಸೀಮಾ ಗುತ್ತಿಗಾರು ವಲಯ ಪರಿಷತ್ತು ಇದರ ವತಿಯಿಂದ ಅನೂಚಾನ ವಿದ್ಯಾ ಪ್ರತಿಷ್ಠಾನದ ಸಹಯೋಗದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಏ.15 ರಿಂದ 40 ದಿನಗಳ ಕಾಲ ವಸಂತ ವೇದ ಶಿಬಿರವು ನಡೆಯಲಿದೆ.

ಕಳೆದ ಹಲವು ವರ್ಷಗಳಿಂದ ವಳಲಂಬೆಯಲ್ಲಿ ನಡೆದುಕೊಂಡು ಬರುತ್ತಿರುವ ವಸಂತ ವೇದ ಶಿಬಿರದಲ್ಲಿ ಅನೇಕ ವಟುಗಳು ವೇದಾಧ್ಯಯನ ನಡೆಸಿದ್ದಾರೆ. ಈ ಕಾರ್ಯಕ್ಕೆ ವಳಲಂಬೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನ ಸಮಸ್ತರು ಪೂರ್ಣ ಸಹಕಾರವನ್ನೂ ನೀಡುತ್ತಿದ್ದು ಈ ಬಾರಿಯ ವೇದ ಶಿಬಿರದ ಉದ್ಘಾಟನೆಯನ್ನು ವೇದಮೂರ್ತಿ ಕೇಶವ ಜೋಯಿಸರು ನೆರವೇರಿಸಲಿದ್ದು ಅನೂಚಾನ ವಿದ್ಯಾಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಭಟ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಿಬಿರದ ಉದ್ಘಾಟನೆಯಂದು ಮಹಾಸಂಕಲ್ಪ ಪೂರ್ವಕ ಗಾಯತ್ರೀ ಪುರಶ್ಚರಣೆ ಪ್ರಾರಂಭವಾಗಿ ಶಿಬಿರದ ಸಮಾರೋಪದಂದು ಗಾಯತ್ರೀ ಹವನ ನಡೆಯಲಿದೆ.
.....................................................................................


ಏ 22 ರಂದು ಲಷ್ಕರಿ ಪ್ರಶಸ್ತಿ ಪ್ರದಾನ

ಪಂಜಸೀಮಾ ಪರಿಷತ್ ಸೀಮಾಸಮ್ಮಿಲನ ಮತ್ತು ವೇ|ಮೂ| ಲಷ್ಕರಿ ಕೇಶವ ಭಟ್ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಏ.22 ರಂದು ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸುಳ್ಯ ತಾಲೂಕು ಕರಿಕಳದಲ್ಲಿರುವ ಪೆರಿಯಪ್ಪು ರಾಮ ಭಟ್ಟರ ಮನೆಯಲ್ಲಿ ನಡೆಯಲಿದೆ.

ಈ ಬಾರಿಯ ಲಷ್ಕರಿ ಪ್ರಶಸ್ತಿಗೆ ಕವಿ ಕೆ.ಪರಮೇಶ್ವರ ಭಟ್ಟ ಬಾಳಿಲ ಆಯ್ಕೆಯಾಗಿದ್ದು ಸಮಾರಂಭದಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಅಭಿನಂದನಾ ಮಾತುಗಳನ್ನಾಡುವರು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುತ್ತದೆ. ಸಾಹಿತ್ಯ -ಸುಬ್ರಾಯ ಚೊಕ್ಕಾಡಿ, ಯಕ್ಷಗಾನ-ಪದ್ಯಾಣ ಗಣಪತಿ ಭಟ್, ವೇದ- ಪುರೋಹಿತ ನಾಗರಾಜ ಭಟ್, ಶಿಲ್ಪಶಾಸ್ತ್ರ - ಮಹೇಶ ಮುನಿಯಂಗಳ ಹಾಗೂ ಎಸ್.ಎಂ.ಪ್ರಸಾದ ಮುನಿಯಂಗಳ, ಕಲೆ-ಬೇರ್ಯ ನಾರಾಯಣ ಭಟ್ಟ, ಸಾಮಾಜಿಕ - ಎನ್.ಎಸ್.ಸುವರ್ಣಿನಿ ಆಯ್ಕೆಯಾಗಿದ್ದಾರೆ.

No comments: