Wednesday, April 16, 2008

ಗುತ್ತಿಗಾರು :ವೇದಶಿಬಿರ ಉದ್ಘಾಟನೆ




ಪಂಜಸೀಮಾ ಗುತ್ತಿಗಾರು ವಲಯ ಪರಿಷತ್ತು ಹಾಗೂ ಅನೂಚಾನ ವಿದ್ಯಾಪ್ರತಿಷ್ಠಾನದ ವತಿಯಿಂದ ಗುತ್ತಿಗಾರಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಂದು ವಸಂತ ವೇದ ಶಿಬಿರವು ಉದ್ಘಾಟನೆಗೊಂಡಿತು.

ವೇದ ಶಿಬಿರವನ್ನು ವೇದಮೂರ್ತಿ ಕರುವಜೆ ಕೇಶವ ಜೋಯಿಸ ಉದ್ಘಾಟಿಸಿ "ವೇದವು ಮನುಷ್ಯ ಬದುಕಿಗೆ ಅಗತ್ಯವಾಗಿರುವ ಅನೇಕ ವಿಚಾರಗಳನ್ನು ತಿಳಿಸಿದೆ" ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ಗ್ರಾಮಣಿ ಕೆ.ಎಂ.ತಿಮ್ಮಪ್ಪಯ್ಯ ಮಾತನಾಡಿ "ನಮ್ಮ ಬುದ್ದಿಯನ್ನು ಪ್ರಚೋದಿಸಿ ಮಾನವ ಬದುಕು ಸಾರ್ಥಕವಾಗಲು ವೇದ ಸಹಕಾರಿ" ಎಂದರು.

ಅನೂಚಾನ ವಿದ್ಯಾಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಭಟ್ ಗುಂಡಿಮಜಲು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಸೀಮಾ ಗ್ರಾಮಣಿ ಮೊಗ್ರ ಸತ್ಯನಾರಾಯಣ ಉಪಸ್ಥಿತರಿದ್ದರು.ವೇದ ಶಿಬಿರದ ಆರಂಭಕ್ಕೆ ಮುನ್ನ ಗಾಯತ್ರೀ ಪುರಶ್ಚರಣೆ ಆರಂಭಗೊಂಡಿತು.

ಗುತ್ತಿಗಾರು ವಲಯ ಪರಿಷತ್ತು ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ,ಗುತ್ತಿಗಾರು ಗ್ರಾಮ ಪರಿಷತ್ತು ಕಾರ್ಯದರ್ಶಿ ಕುಮಾರ ಸ್ವಾಮಿ ಮೇಲ್ತೋಟ ವಂದಿಸಿದರಿ.ಅನೂಚಾನ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕಮ ನಿರ್ವಹಿಸಿದರು.



ವೇದಶಿಬಿರ ಒಂದು ನೋಟ

No comments: